ಲೇಖಕ "ಜ್ಞಾನಯೋಗಿ" ಅವರು ಬರೆದಿರುವ
ನೂರಕ್ಕೂ ಹೆಚ್ಚು ಪುಸ್ತಕಗಳಲ್ಲಿ ಈ ವರೆಗೆ 23 ಪುಸ್ತಕಗಳು ಪ್ರಕಟಗೊಂಡಿವೆ.
ಪ್ರತಿಯೊಂದು ಪುಸ್ತಕದ ಪ್ರತಿಯೊಂದು ಪುಟವೂ ಓದುಗರ ಮನಸ್ಸನ್ನು ಸೂರೆಗೊಳ್ಳುತ್ತಿವೆ.
ಜ್ಞಾನಯೋಗಿ ಅವರ ಕೃತಿಗಳು ಇನ್ನೂ ಹೆಚ್ಚು ಹೆಚ್ಚು ಜನರನ್ನು ತಲುಪಬೇಕೆಂದು ಜ್ಞಾನಯೋಗಿ
ಅವರ ಅನೇಕ ಅಭಿಮಾನಿಗಳು ಒತ್ತಾಯಪಡಿಸತೊಡಗಿದರು. ಆದ್ದರಿಂದ ನಾವು ಇಂದು ಜ್ಞಾನಯೋಗಿ ಅವರ
ಕೃತಿಗಳನ್ನು ಪರಿಚಯಿಸುತ್ತಿದ್ದೇವೆ. ಜ್ಞಾನಯೋಗಿ ಅವರ 23 ಕೃತಿಗಳಲ್ಲಿ ನಾವು
ಪರಿಚಯಿಸುತ್ತಿರುವ ಮೊದಲನೆ ಕೃತಿ "ಮನಶ್ಶಾಂತಿಗೆ ಜ್ಞಾನಾಮೃತ".
ಮನಶ್ಶಾಂತಿಗೆ ಜ್ಞಾನಾಮೃತ

ಮನುಜ ಸಂತೋಷವಾಗಿರಬೇಕೆಂದರೆ ಆತನ ಮನಸ್ಸು ಶಾಂತವಾಗಿರಬೇಕು. ಶಾಂತವಾಗಿಲ್ಲದ
ಮನಸ್ಸಿಗೆ ಸಂತೋಷವು ಎಂದೆಂದಿಗೂ ದೊರೆಯುವುದಿಲ್ಲ. ಈ ಲೋಕದಲ್ಲಿ ಸುಖ ಸಂತೋಷಗಳನ್ನು
ಬಯಸದ ವ್ಯಕ್ತಿಗಳು ಯಾರೂ ಇರುವುದಿಲ್ಲ. ಪ್ರತಿಯೊಬ್ಬರಿಗೂ ಸುಖ ಸಂತೋಷಗಳು ಬೇಕು.
ಪ್ರತಿಯೊಬ್ಬರೂ ಈ ರೀತಿ ಸುಖ ಸಂತೋಷಗಳನ್ನು ಬಯಸುವುದು ತಪ್ಪಲ್ಲ. ಆದರೆ ಸುಖ
ಸಂತೋಷಗಳನ್ನು ಪಡೆದುಕೊಳ್ಳಲು ಅನುಸರಿಸುತ್ತಿರುವ ಮಾರ್ಗ ತಪ್ಪು. ಹಾಗಾದರೆ ಸುಖ
ಸಂತೋಷಗಳನ್ನು ಪಡೆದುಕೊಳ್ಳಲು ಸರಿಯಾದ ಮಾರ್ಗ ಯಾವುದು? ಈ ಪ್ರಶ್ನೆಗೆ ಉತ್ತರವನ್ನು ಈ
ಕೃತಿಯಲ್ಲಿ ಕಾಣಬಹುದು. ಸುಖ, ಸಂತೋಷ, ತೃಪ್ತಿ, ನೆಮ್ಮದಿ, ಶಾಂತಿಗಳನ್ನು
ಪಡೆದುಕೊಳ್ಳಲು ಸರಿಯಾದ ಮಾರ್ಗ ಯಾವುದು ಎಂಬ ವಿಚಾರವನ್ನು "ಜ್ಞಾನಯೋಗಿ" ಅವರು ಈ
ಕೃತಿಯಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ.
ಮನುಜನ
ಮನಸ್ಸಿನಲ್ಲಿ ಅಡಗಿರುವ ಬಗೆ ಬಗೆಯ ದುಃಖ, ಕಳವಳ, ವೇದನೆ, ಭಯ, ಹುಚ್ಚುತನ, ಬೆಪ್ಪುತನ,
ಮೂರ್ಖತನಗಳನ್ನು ದೂರಮಾಡಲು ಸಹಾಯಕಾರಿ ಆಗುತ್ತದೆ ಈ ಪುಸ್ತಕ. ಮಾತ್ರವಲ್ಲ, ಜೀವನವು
ಉತ್ತಮ ಮಟ್ಟದ ಕಡೆಗೆ ಸಾಗಲು ಹೊಸ ಮಾರ್ಗ ಗೋಚರಿಸಲು ಆರಂಭವಾಗುತ್ತದೆ. ಜೀವನದಲ್ಲಿ
ಹೆಚ್ಚು ನೋವನ್ನು ಅನುಭವಿಸಿರುವ ಮನುಜರಿಗಂತೂ ಈ ಪುಸ್ತಕವು ಒಂದು ಸಂಜೀವಿನಿ ಎಂದೇ
ಹೇಳಬೇಕು. ಒಟ್ಟಾರೆ, ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಕಲಿ ಸುಖ-ಸಂತೋಷಕ್ಕೆ ಮೋಸಹೋಗದೆ
ನಿಜವಾದ ಮತ್ತು ಶಾಶ್ವತವಾದ ಸುಖ, ಸಂತೋಷ, ತೃಪ್ತಿ, ಶಾಂತಿಗಳು ದೊರೆಯಲು, ಮನಸ್ಸಿನ
ಆರೋಗ್ಯ ವೃದ್ಧಿಯಾಗಲು, ಮನಸ್ಸಿನ ಶಕ್ತಿ ಹೆಚ್ಚಾಗಲು, ಸದಾ ಆನಂದವಾಗಿರಲು, ಶಾಶ್ವತವಾದ
ಆನಂದವನ್ನು ಹೊಂದಲು ಜ್ಞಾನಯೋಗಿ ಅವರು ಬರೆದಿರುವ ಈ "ಮನಶ್ಶಾಂತಿಗೆ ಜ್ಞಾನಾಮೃತ" ಎಂಬ ಕೃತಿಯು ಮನುಕುಲಕ್ಕೆ ಒಂದು ವರದಾನ.
No comments:
Post a Comment