"ಜ್ಞಾನಯೋಗಿ" ಅವರ ಕೃತಿಗಳನ್ನು ಕುರಿತು
ಜ್ಞಾನಯೋಗಿ ಅವರ ಕೃತಿಗಳು ಮನುಜನಲ್ಲಿ ಬುದ್ಧಿ ಶಕ್ತಿಯನ್ನು, ಮನಸ್ಸಿನ ಶಕ್ತಿಯನ್ನು,
ಆತ್ಮಶಕ್ತಿಯನ್ನು, ಸ್ವಯಂಶಕ್ತಿಯನ್ನು ಅಪಾರವಾಗಿ ಹೆಚ್ಚಿಸುತ್ತವೆ. ಜ್ಞಾನಯೋಗಿ ಅವರು
ಬರೆದಿರುವ ಯಾವುದೇ ಕೃತಿಯನ್ನು ಓದಿದರೂ ಅಪಾರವಾದ ಜ್ಞಾನ, ಆನಂದ, ತೃಪ್ತಿ, ಶಾಂತಿ,
ನೆಮ್ಮದಿ, ಬುದ್ಧಿ ಚತುರತೆ, ವಿವೇಕ, ಧೈರ್ಯ, ಸ್ವಯಂಶಕ್ತಿ, ಕಲ್ಪನಾಶಕ್ತಿ,
ಆತ್ಮವಿಶ್ವಾಸ, ಸಕಾರಾತ್ಮಕ ಭಾವನೆಗಳು, ಜನ್ಮವನ್ನು ಸಾರ್ಥಕಪಡಿಸಿಕೊಳ್ಳುವ ಭಾವನೆ,
ಧರ್ಮ ಅಧರ್ಮಗಳ ಸ್ಪಷ್ಟ ಪರಿಜ್ಞಾನ, ಉತ್ತಮ ವ್ಯಕ್ತಿತ್ವ ಮುಂತಾದ ಹಲವಾರು ಉತ್ತಮ
ಮೌಲ್ಯಗಳು ಓದುಗರಲ್ಲಿ ಅಭಿವೃದ್ಧಿಯಾಗತೊಡಗುತ್ತವೆ. ಇವರ ಬರಹಗಳಲ್ಲಿ ಆಧ್ಯಾತ್ಮಿಕ
ವಿಚಾರಗಳು, ವ್ಯಕ್ತಿತ್ವ ವಿಕಾಸದ ವಿಚಾರಗಳು, ಹಣಕಾಸಿನ ವಿಚಾರಗಳು, ದಾಂಪತ್ಯ ಜೀವನದ
ವಿಚಾರಗಳು, ಬುದ್ಧಿ, ವಿವೇಕ, ಜ್ಞಾನ, ಪ್ರಾಪಂಚಿಕ ಪರಿಜ್ಞಾನ, ಆತ್ಮಜ್ಞಾನ, ಧರ್ಮ,
ಪಾಪ-ಪುಣ್ಯ - ಹೀಗೆ ಹಲವಾರು ವಿಚಾರಗಳನ್ನು ಕುರಿತು ಸಂಪೂರ್ಣವಾದ ವಿವರಣೆಯನ್ನು
ಕಾಣಹುದು. ಹೀಗೆ ಮನುಜ ಅತ್ಯವಶ್ಯಕವಾಗಿ ಅರಿತುಕೊಳ್ಳಬೇಕಾದ ಅನೇಕ ವಿಚಾರಗಳನ್ನು
ಜ್ಞಾನಯೋಗಿ ಅವರು ತಮ್ಮ ಕೃತಿಗಳಲ್ಲಿ ಅತ್ಯಂತ ಅದ್ಭುತವಾಗಿ, ಅತ್ಯಂತ ಸರಳವಾಗಿ, ಓದುಗರ
ಮನಮುಟ್ಟುವಂತೆ ವಿವರಿಸಿದ್ದಾರೆ. ಇವರ ಕೃತಿಗಳನ್ನು ಓದುವುದರಿಂದ ಓದುಗರಲ್ಲಿ
ಸರ್ವತೋಮುಖ ಅಭಿವೃದ್ಧಿಯಾಗುವುದು ಖಂಡಿತ. ಅತಿ ಕಡಿಮೆ ವಾಕ್ಯಗಳಲ್ಲಿ ಅತಿ ಹೆಚ್ಚು
ವಿಚಾರಗಳನ್ನು ಓದುಗರಿಗೆ ತಲುಪಿಸುವಂತೆ ಬರೆಯುವ ಶೈಲಿಯನ್ನು ಕರಗತ ಮಾಡಿಕೊಂಡಿರುವ ಲೇಖಕ
ಜ್ಞಾನಯೋಗಿ ಅವರ ಕೃತಿಗಳು ಇಂದಿನ ಬಿಡುವಿಲ್ಲದ ಜೀವನಕ್ಕೆ ಒಂದು ವರದಾನವಾಗಿದೆ.
ಈ ಲೋಕದಲ್ಲಿ ಅತ್ಯಂತ ಅಮೂಲ್ಯವಾದ ವಸ್ತುಗಳು ಕೆಲವು ಮಾತ್ರವೇ ಇರುತ್ತವೆ. ಅವುಗಳಲ್ಲಿ ಜ್ಞಾನಯೋಗಿ ಅವರ ಕೃತಿಗಳೂ ಒಂದು ಎಂಬ ಸತ್ಯಾಂಶವನ್ನು ಎಷ್ಟು ಬೇಗ ಅರಿತುಕೊಂಡರೆ ಅಷ್ಟು ಬೇಗ ಇವರ ಕೃತಿಗಳನ್ನು ಓದಿ ಸೌಭಾಗ್ಯವನ್ನು ವೃದ್ಧಿ ಮಾಡಿಕೊಳ್ಳಬಹುದು; ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಬಹುದು.
ಜ್ಞಾನಯೋಗಿ ಅವರು ಬರೆದಿರುವ ಕೃತಿಗಳು ಜ್ಞಾನನಿಧಿ ಇದ್ದಂತೆ. ಅಂತಹ ಜ್ಞಾನನಿಧಿ ನಿಮ್ಮ ವಶವಾಗಲು ಜ್ಞಾನಯೋಗಿ ಅವರ ಕೃತಿಗಳನ್ನು ಓದಿ.
ಜ್ಞಾನಯೋಗಿ ಅವರು ಬರೆದಿರುವ ಕೃತಿಗಳಲ್ಲಿ ಇದುವರೆಗೆ 23 ಕೃತಿಗಳು ಪ್ರಕಟಿತವಾಗಿವೆ. ಅವುಗಳಲ್ಲಿ ನಾವಿಂದು ಪರಿಚಯಿಸುತ್ತಿರುವ ಮೊದಲ ಪುಸ್ತಕ "ಮನಶ್ಶಾಂತಿಗೆ ಜ್ಞಾನಾಮೃತ"......
No comments:
Post a Comment